Hanigavitegalu
(ಜಸ್ಟ್ ತಮಾಷೆಗಾಗಿ ಪ್ರಸ್ತುತ ಸನ್ನಿವೇಶಕ್ಕೆ ತಕ್ಕ ಹನಿಗವನಗಳು) (೧) ಅವರು ಏರಿಸಿದರು ಬಜೆಟ್ ನ ಜೆಟ್.. ಪಾಪ ನೌಕರರಿಗೆ ಸಿಕ್ಕಿತು ಜೆಟ್ ನಿಂದ ಬಂದ ಹೊಗೆ ಜಸ್ಟ್..!! (೨) ಮಾದ್ಯಮದವರು ಮದ್ಯಮದವರು ಹೇಳಿದ್ದೆ ಹೇಳಿದ್ದು ಬಂಪರ್ ಬಂಪರ್.. ಹುಸಿ ಮಾತುಗಳಲ್ಲಿ ಸಿಲುಕಿ ಈಗ ಅದೆಲ್ಲಾ ಆಗಿದೆ ಪಂಕ್ಚರ್ ಪಂಕ್ಚರ್..!! (೩) ದುಡಿದವಗೆ ದುಡಿವವಗೆ, ಮತ್ತೇ ಮತ್ತೇ ಅಂತಾರೆ, ದುಡಿ ದುಡಿ ದುಡಿ.. ಮತ್ತೋಂದು ಮಾತು ತಪ್ಪದೇ ಹೇಳ್ತಾರೆ, ಮತ್ತೇನು ಕೇಳ್ಬೇಡಿ ಕೇಳ್ಬೇಡಿ ಕೇಳ್ಬೇಡಿ..!! (೪) ಹೆಚ್ಚು ಹೆಚ್ಚು ಕರ ಕಟ್ಟುವವನು ನೌಕರ; ತಿಂದವನು ಆದ ಸಾಹುಕರ.. ನೌಕರನಿಗೆ ಸಿಕ್ಕಿತಷ್ಟೇ, ಕಣ್ಣೀರ್ ಒರೆಸುವ 'ಕರ'ವಸ್ತ್ರ..!! (೫) ನ್ಯಾಯಯುತವಾಗಿ ಕಾಸು ಕೊಡಲು ಅಬ್ಬಬ್ಬಾ ಯಾಕಿಷ್ಟು ಚೌಕಾಸಿ..? ಅಷ್ಟು ಇಷ್ಟು ಕೊಡುವರು ಎಲ್ಲರನು ಕಾಯಿಸಿ ಕಾಯಿಸಿ..!! -ವ್ಹಿಸಿ