*ಬೆಸುಗೆ*
ಕಥೆ
ರಾಜೇಶ್ ಏಕಾಂಗಿ ಯಾಗಿ ಪಾರ್ಕ್ ನ ಬೆಂಚ್ ಒಂದರ ಮೇಲೆ ಕುಳಿತಿದ್ದ. ಮನಸ್ಸು ತುಂಬಾ ಭಾರವಾಗಿತ್ತು. ಆಗಲೇ ಸಂಜೆಯಾಗುತ್ತಾ ಬಂದಿತ್ತು. ಉದ್ಯಾನವನದ ತಂಗಾಳಿ,ಹೂಗಳು, ಗಿಡಮರಗಳು, ಹಸಿರು ಹುಲ್ಲಿನ ಮೇಲೆ ಆಟವಾಡುತ್ತಿದ್ದ ಮಕ್ಕಳ ವಿನೋದ ಎಲ್ಲವೂ
ಬಾಹ್ಯವಾಗಿ ಮನಸ್ಸನ್ನು ಖುಷಿಪಡಿಸಲು ಯತ್ನಿಸುತ್ತಿದ್ದರೂ ರಾಜೇಶನ ಮನಸ್ಸಿನ ಆಂತರಿಕ ತುಮುಲಗಳು ಇದಕ್ಕೆಲ್ಲ ಪ್ರತಿರೋಧವನ್ನು ಒಡ್ಡುತ್ತಿದ್ದವು.
ಕೆಲವು ಗಂಟೆಗಳ ಹಿಂದೆ ನಡೆದ ಮನೆಯಲ್ಲಿನ ಘಟನೆಗಳು ಮನಸ್ಸನ್ನು ಘಾಸಿಗೊಳಿಸಿದ್ದವು.ತನ್ನ ಹೆಂಡತಿ ಸುಮಾಳ ಹಠದಿಂದಾಗಿ ನಡೆದ ವಾಗ್ವಾದ ರಾಜೇಶ್ ನನ್ನು ಮನೆ ತೊರೆಯುವಂತೆ ಮಾಡಿತ್ತು.ಸುಮಾ & ರಾಜೇಶ್ ಗೆ ಅವರವರ ಮನೆಯವರೆಂದರೆ ಪಂಚಪ್ರಾಣ.ತಮ್ಮ ತಮ್ಮ ಮನೆಯವರಿಂದ ಏನೇ ತಪ್ಪುಗಳು ಅತಾಚುರ್ಯಗಳು ನಡೆದರೂ ಮಾಫಿ ಮಾಡುವಂತ ಮನಸ್ಸು. ಆದರೆ ಸುಮಾಳಿಗೆ ಗಂಡನ ಮನೆಯವರೆಂದರೆ ಅಷ್ಟಕಷ್ಟೇ. ರಾಜೇಶ್ ನಿಗೂ ಹೆಂಡತಿಯ ಮನೆಯವರೆಂದರೆ ಅಷ್ಟಕಷ್ಟೇ. ಸಣ್ಣ ತಪ್ಪುಗಳನ್ನು ದೊಡ್ಡದಾಗಿ ಮಾಡಿ ಮಾಡುವ ವಾಗ್ವಾದ ಮನೆಯಲ್ಲಿ ಸಾಮಾನ್ಯವಾಗಿತ್ತು.ಈ ವಿಚಾರವಾಗಿ ನಡೆದ ವಾಗ್ವಾದ ದಲ್ಲಿ ಸುಮಾ ತೊರೆದರೆ, ರಾಜೇಶ್ ನು ಮನೆ ತೊರೆದು ಬಂದು ಪಾರ್ಕ್ ನಲ್ಲಿ ಕುಳಿತಿದ್ದ.
ಅಷ್ಟರಲ್ಲಿ ಒಂದು ಚೆಂಡು ರಾಜೇಶ್ ನ ಕಾಲ ಕೆಳಗೆ ಬಂದು ಸೇರಿತ್ತು. ಚೆಂಡನ್ನು ಹಿಡಿಯಲು ಒಂದು ಪುಟ್ಟ ಮಗು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ತನ್ನ ಕಡೆಗೆ ಬರುತ್ತಿರುವುದನ್ನು ಕಂಡ ರಾಜೇಶ್ ತಾನೇ ಚೆಂಡನ್ನು ಎತ್ತಿ ಮಗುವಿಗೆ ಕೊಡಲು ಮುಂದಾದ. ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಬರುತ್ತದ್ದ ಮಗು ಆಯ ತಪ್ಪಿ ಕೆಳಗೆ ಬಿದ್ದಿತು .ರಾಜೇಶ್ ದೌಡಾಯಿಸಿ ಅಳುತ್ತದ್ದ ಮಗುವನ್ನು ಎತ್ತಿ ರಮಿಸತೊಡಗಿದ. ಅನತಿ ದೂರದಲ್ಲಿ ಉದ್ದ ಮಗುವಿನ ತಂದೆತಾಯಿ,ಅಜ್ಜ ಅಜ್ಜಿ, ಇನ್ನಿತರರು ಬಂದು ಮಗುವನ್ನು ಸಾಂತ್ವನ ಪಡಿಸುತ್ತಾ ರಾಜೇಶ್ ನಿಗೆ ಥ್ಯಾಂಕ್ಸ್ ಹೇಳಿದರು. ಮಗುವಿನ ಮೇಲೆ ಅವರಿಗಿದ್ದ ಪ್ರೀತಿ ಮಮತೆ ಕಂಡು ರಾಜೇಶ್ ನಿಗೆ ಸಂತೋಷವಾಗಿತ್ತು.
ಯಾರದೋ ಮಗುವಿಗೆ ತನ್ನ ಹೃದಯ ಈ ಪರಿ ಮಿಡಿದರೆ , ತನ್ನ ಮಗುವಿಗೆ ?
ತನ್ನ ಮಗುವಿನ ನೆನಪಾಗುತ್ತಿದ್ದಂತೆ ರಾಜೇಶ್ ಮನೆ ಕಡೆ ದೌಡಾಯಿಸಿದ.ಮನೆ ಬಾಗಿಲು ಹಾಗೇ ತೆರೆದಿತ್ತು.ಮನೆಯಲ್ಲಿ ಯಾರೂ ಇರಲಿಲ್ಲ. ಆಳುತ್ತಿದ್ದ ತನ್ನ ಮಗುವನ್ನು ಎತ್ತಿ ಮುದ್ದಾಡಿದ.ಇತ್ತ ಸುಮಾ ಮಗುವಿನ ನೆನಪಾಗಿ ಮತ್ತೆ ಮನೆ ಕಡೆ ಮರಳಿದ್ದಳು.ಮಗು ಇಬ್ಬರನ್ನೂ ಬೆಸೆದಿತ್ತು.ತಂದೆ ತಾಯಿ ಕರ್ತವ್ಯ ಅರಿವಾಗಿತ್ತು. ಪ್ರೀತಿಯನ್ನು ಹಂಚಬೇಕು ಆಗ ಅದು ತಾನಾಗೆ ಮರಳಿ ಸಿಗುತ್ತದೆ ಅಲ್ಲವೇ?
✍ವೆಂಕಟೇಶ ಚಾಗಿ
ಲಿಂಗಸುಗೂರ

Comments
Post a Comment
Comments here