ಆಶಯ
ಈ ದಿನವೆ ಕೊನೆಯಲ್ಲ
ದಿನಗಳು ನೂರಿಹವು
ಆಸೆಯ ಬಿಡಬೇಡ
ಓ ನನ್ನ ಮನವೇ||
ಬದುಕು ಹರಿಯಲು ನೂರು
ದಾರಿಗಳು ಬಹಳುಂಟು
ಹಸಿರೆಂಬ ಉಸಿರಿರಲಿ
ಕೊನೆಯ ಗಳಿಗೆ||
ಸುಖ ದುಃಖ ಸಮವುಂಟು
ಈ ಬಾಳ ಬುತ್ತಿಯಲಿ
ಬದುಕಿರುವ ತನಕ ನಗುವೊಂದೆ
ಚೇತನವು ಬದುಕಲ್ಲಿ||
ಆ ಗೊಡವೆ ಈ ತರವೆ
ಅರಿತುಕೋ ಓ ಮನಸೆ
ನಿನ್ನಂತೆ ಜಗವಿವುದು
ನೀ ನೋಡೊ ನೋಟದಲಿ||
ಸುಳಿಯೊಳಗೆ ಸಿಲುಕದಿರು
ಅತಿಯಾಸೆ ನೀರೊಳಗೆ
ಬದುಕೆ ಮಸಣವಾದೀತು
ಮರೆಯದಿರು ಓ ಮನವೆ ||
ಕಲ್ಲಿರಲಿ ಮುಳ್ಳಿರಲಿ
ಪ್ರತಿಹಾದಿ ಹಿತವಿರಲಿ
ಮಾತಲ್ಲಿ ಮುತ್ತಿರಲಿ
ಜಗವೇ ಕೈಯೊಳಗೆ ||
✍ವೆಂಕಟೇಶ ಚಾಗಿ
ಲಿಂಗಸುಗೂರ
ಈ ದಿನವೆ ಕೊನೆಯಲ್ಲ
ದಿನಗಳು ನೂರಿಹವು
ಆಸೆಯ ಬಿಡಬೇಡ
ಓ ನನ್ನ ಮನವೇ||
ಬದುಕು ಹರಿಯಲು ನೂರು
ದಾರಿಗಳು ಬಹಳುಂಟು
ಹಸಿರೆಂಬ ಉಸಿರಿರಲಿ
ಕೊನೆಯ ಗಳಿಗೆ||
ಸುಖ ದುಃಖ ಸಮವುಂಟು
ಈ ಬಾಳ ಬುತ್ತಿಯಲಿ
ಬದುಕಿರುವ ತನಕ ನಗುವೊಂದೆ
ಚೇತನವು ಬದುಕಲ್ಲಿ||
ಆ ಗೊಡವೆ ಈ ತರವೆ
ಅರಿತುಕೋ ಓ ಮನಸೆ
ನಿನ್ನಂತೆ ಜಗವಿವುದು
ನೀ ನೋಡೊ ನೋಟದಲಿ||
ಸುಳಿಯೊಳಗೆ ಸಿಲುಕದಿರು
ಅತಿಯಾಸೆ ನೀರೊಳಗೆ
ಬದುಕೆ ಮಸಣವಾದೀತು
ಮರೆಯದಿರು ಓ ಮನವೆ ||
ಕಲ್ಲಿರಲಿ ಮುಳ್ಳಿರಲಿ
ಪ್ರತಿಹಾದಿ ಹಿತವಿರಲಿ
ಮಾತಲ್ಲಿ ಮುತ್ತಿರಲಿ
ಜಗವೇ ಕೈಯೊಳಗೆ ||
✍ವೆಂಕಟೇಶ ಚಾಗಿ
ಲಿಂಗಸುಗೂರ
Comments
Post a Comment
Comments here