*ಬಾಯಾರಿದ ಕಾಗೆ*
ಕಾಗೆಯೊಂದು ನೀರ ಅರಸಿ
ಅಲೆಯತೊಡಗಿತು
ಎಲ್ಲ ಕಡೆಯೂ ನೀರು ಸಿಗದೆ
ಬಳಲಿ ನೊಂದಿತು||
ನೀರು ಹುಡುಕುತೊಂದು
ಮನೆಯ ಕಡೆಗೆ ಬಂದಿತು
ಗಳಿಗೆಯಲ್ಲಿ ನೀರು ಕಂಡು
ಖುಷಿಯ ಪಟ್ಟಿತು||
ಅಲ್ಪ ಸ್ವಲ್ಪ ಇದ್ದ ನೀರು
ಸಿಗದೇ ಹೋಯಿತು
ಕಾಗೆ ಪಟ್ಟ ಶ್ರಮವು ಎಲ್ಲ
ವ್ಯರ್ಥವಾಯಿತು||
ಗಡಿಗೆ ಪಕ್ಕದಲ್ಲೇ ಕಲ್ಲ
ಗುಂಪು ನೋಡಿತು
ಕೊಕ್ಕಿನಿಂದ ಕಲ್ಲು ತಂದು
ಗಡಿಗೆ ತುಂಬಿತು||
ನೀರು ಮೇಲೆ ಬರುವುದನ್ನು
ಕಾಗೆ ನೋಡಿತು
ಮೇಲೆ ಬಂದ ನೀರು ಕುಡಿದು
ಹಾರಿ ಹೋಯಿತು||
ಕಷ್ಟ ಪಡದೇ ನಮಗೆ ಎಂದು
ಏನೂ ದೊರಕದು
ಕಾಗೆ ಕಥೆಯು ಮರೆಯದಂಥ
ಪಾಠ ಕಲಿಸಿತು||
✍ವೆಂಕಟೇಶ ಚಾಗಿ
ಲಿಂಗಸುಗೂರ
ಕಾಗೆಯೊಂದು ನೀರ ಅರಸಿ
ಅಲೆಯತೊಡಗಿತು
ಎಲ್ಲ ಕಡೆಯೂ ನೀರು ಸಿಗದೆ
ಬಳಲಿ ನೊಂದಿತು||
ನೀರು ಹುಡುಕುತೊಂದು
ಮನೆಯ ಕಡೆಗೆ ಬಂದಿತು
ಗಳಿಗೆಯಲ್ಲಿ ನೀರು ಕಂಡು
ಖುಷಿಯ ಪಟ್ಟಿತು||
ಅಲ್ಪ ಸ್ವಲ್ಪ ಇದ್ದ ನೀರು
ಸಿಗದೇ ಹೋಯಿತು
ಕಾಗೆ ಪಟ್ಟ ಶ್ರಮವು ಎಲ್ಲ
ವ್ಯರ್ಥವಾಯಿತು||
ಗಡಿಗೆ ಪಕ್ಕದಲ್ಲೇ ಕಲ್ಲ
ಗುಂಪು ನೋಡಿತು
ಕೊಕ್ಕಿನಿಂದ ಕಲ್ಲು ತಂದು
ಗಡಿಗೆ ತುಂಬಿತು||
ನೀರು ಮೇಲೆ ಬರುವುದನ್ನು
ಕಾಗೆ ನೋಡಿತು
ಮೇಲೆ ಬಂದ ನೀರು ಕುಡಿದು
ಹಾರಿ ಹೋಯಿತು||
ಕಷ್ಟ ಪಡದೇ ನಮಗೆ ಎಂದು
ಏನೂ ದೊರಕದು
ಕಾಗೆ ಕಥೆಯು ಮರೆಯದಂಥ
ಪಾಠ ಕಲಿಸಿತು||
✍ವೆಂಕಟೇಶ ಚಾಗಿ
ಲಿಂಗಸುಗೂರ
Comments
Post a Comment
Comments here