*ಭೀಮನ ಆಟ*
ಆಟಕೆ ಕರೆದರು ಭೀಮನನ್ನು
ನೂರು ಮಂದಿ ಕೌರವರು
ಮರಕೋತಿ ಆಟ ಆಡುವ ಎಂದು
ಎಲ್ಲರು ನಿರ್ಣಯ ಮಾಡಿದರು
ಅವಲಕಿ ಪವಲಕಿ ಹಾಕಿದರು
ಕೌರವರೆಲ್ಲರು ಗೆದ್ದರು
ಭೀಮನು ಸೋತನು ಆಟದಲಿ
ಕೋಲನು ತರಲು ಓಡಿದನು||
ಎಲ್ಲರು ಮರವನು ಏರಿದರು
ಭೀಮನ ಛೇಡಿಸಿ ನಕ್ಕರು
ಹತ್ತಲು ಆಗದೆ ಮರವನ್ನು
ಸಪ್ಪೆಯ ಮೋರೆ ಹಾಕಿದನು ||
ಯೋಚನೆ ಮಾಡುತ ಭೀಮನು
ಅಲುಗಾಡುವ ಎಲೆ ಕಂಡನು
ಬೊಡ್ಡೆಯ ಹಿಡಿದನು ಭೀಮನು
ಅಲುಗಾಡಿಸಿದನು ಮರವನ್ನು||
ತಪತಪ ಬಿದ್ದರು ಮರದಿಂದ
ಭೀಮನ ಕೈಗೆ ಸಿಕ್ಕಿದರು
ಗೆದ್ದನು ಭೀಮನು ಆಟದಲಿ
ಜೈ ಜೈ ಎಂದರು ಕೌರವರು ||
✍ವೆಂಕಟೇಶ ಚಾಗಿ
ಲಿಂಗಸುಗೂರ
Comments
Post a Comment
Comments here