*ಮತ್ತೆ ಮರಳಿತು*..
(ಕವಿತೆ)
ಯಾರ ತಪದ ಫಲವು ದೊರೆಯಿತು
ಬಾನು ಧರೆಗಿದೋ ಸಂಭ್ರಮ
ಮೆಲ್ಲ ಬೀಸುವ ಗಾಳಿ ತಂದಿತು
ಮಧುರ ಮಿಲನದ ಸರಿಗಮ||
ಕಪ್ಪು ಬೆಣ್ಣೆಯ ಕಡಲು ತಂಬಿತು
ಮಿಂಚು ಗುಡುಗಿನ ತನನನ
ತಂಪು ಗಾಳಿಯು ಧರೆಗೆ ತಾಕಿತು
ಪುಳಕಗೊಂಡಿತು ಮೈಮನ||
ಮೊದಲ ಮುತ್ತಿನ ಹನಿಯು ತಾಕಿತು
ಧರೆಯ ಒಡಲಲಿ ಕಂಪನ
ಹಸಿರ ಸೆರಗಿಗೆ ಉಸಿರು ತಾಕಿತು
ನಗುವ ಚಿಮ್ಮಿತು ಹೂಬನ||
ಮೋಡ ಸರಿಯಿತು ಬಿಸಿಲು ಮೂಡಿತು
ಹಕ್ಕಿ ಗೂಡಲಿ ಗುಂಗುನ
ನೆಲವು ನೆಂದಿತು ಜೀವ ಮೊಳೆಯಿತು
ಮತ್ತೆ ಮರಳಿತು ಶುಭದಿನ||
✍ವೆಂಕಟೇಶ ಚಾಗಿ
ಶಿಕ್ಷಕರು
ಲಿಂಗಸುಗೂರ
(ಕವಿತೆ)
ಯಾರ ತಪದ ಫಲವು ದೊರೆಯಿತು
ಬಾನು ಧರೆಗಿದೋ ಸಂಭ್ರಮ
ಮೆಲ್ಲ ಬೀಸುವ ಗಾಳಿ ತಂದಿತು
ಮಧುರ ಮಿಲನದ ಸರಿಗಮ||
ಕಪ್ಪು ಬೆಣ್ಣೆಯ ಕಡಲು ತಂಬಿತು
ಮಿಂಚು ಗುಡುಗಿನ ತನನನ
ತಂಪು ಗಾಳಿಯು ಧರೆಗೆ ತಾಕಿತು
ಪುಳಕಗೊಂಡಿತು ಮೈಮನ||
ಮೊದಲ ಮುತ್ತಿನ ಹನಿಯು ತಾಕಿತು
ಧರೆಯ ಒಡಲಲಿ ಕಂಪನ
ಹಸಿರ ಸೆರಗಿಗೆ ಉಸಿರು ತಾಕಿತು
ನಗುವ ಚಿಮ್ಮಿತು ಹೂಬನ||
ಮೋಡ ಸರಿಯಿತು ಬಿಸಿಲು ಮೂಡಿತು
ಹಕ್ಕಿ ಗೂಡಲಿ ಗುಂಗುನ
ನೆಲವು ನೆಂದಿತು ಜೀವ ಮೊಳೆಯಿತು
ಮತ್ತೆ ಮರಳಿತು ಶುಭದಿನ||
✍ವೆಂಕಟೇಶ ಚಾಗಿ
ಶಿಕ್ಷಕರು
ಲಿಂಗಸುಗೂರ
Comments
Post a Comment
Comments here