**ಕಟ್ಟಲಾಗಿದೆ ಮನೆಯ**
(ಕವನ)
ಕಟ್ಟಲಾಗಿದೆ ಮನೆಯ
ಮನೆ ಮನೆಗಳ ಮೇಲೆ
ಬೀಸುವ ಗಾಳಿಯ
ತಡೆದು
ಆಗಸ ಮುಟ್ಟುವ ತನಕ
ಮೋಡಗಳು ದಿಕ್ಕೆಡುವ ಹಾಗೆ
ಕಟ್ಟಲಾಗಿದೆ ಮನೆಯ..||
ಕಟ್ಟಲಾಗಿದೆ ಮನೆಯ
ಫಲವತ್ತಾದ ಭೂಮಿಯ ಮೇಲೆ
ಚಿಗುರೊಡೆಯುವ ಬೀಜಗಳ
ಮಣ್ಣು ಮಾಡಿ,
ನೆಲದ ಮೇಲೆಲ್ಲ ಕಾಂಕ್ರೀಟ್
ಹಾಸಿಗೆಯ ಹಾಸಿ
ಕಟ್ಟಲಾಗಿದೆ ಮನೆಯ..||
ಕಟ್ಟಲಾಗಿದೆ ಮನೆಯ
ತಂಪು ನೆರಳನು ಬಿಸಿ ಮಾಡಿ
ಗಿಡಮರಗಳ ಮಾರಣ ಹೋಮ
ಮಾಡಿ,
ಕೆರೆ ನದಿಗಳ ಹೊತ್ತಿ ಉರಿಸಿ
ಕಟ್ಟಲಾಗಿದೆ ಮನೆಯ..||
ಕಟ್ಟಲಾಗಿದೆ ಮನೆಯ
ನಿರ್ಮಲ ಸಾಗರದ ಮೇಲೆ
ಜಲಚರಗಳ ಜಗವ
ಮುಚ್ಚಿ,
ಬೆಟ್ಟಗುಡ್ಡಗಳ ಸಮಗೊಳಿಸಿ
ಹೆಸರೇ ಇಲ್ಲದಂತೆ ಮಾಡಿ
ಕಟ್ಟಲಾಗಿದೆ ಮನೆಯ..||
ಕಟ್ಟಲಾಗಿದೆ ಮನೆಯ
ಕಾನನದ ಮೃತ ದೇಹದ ಮೇಲೆ
ರವಿಯ ಬೆಂಕಿ ಉಂಡೆಗಳ
ನೆಲದ ಮೇಲೆ ಚೆಲ್ಲಿ,
ಹುಲಿ ಸಿಂಹ ಕರಡಿಗಳ ಓಡಿಸಿ
ಮಾನವೀಯತೆಯ ಮರೆತು
ಕಟ್ಟಲಾಗಿದೆ ಮನೆಯ..||
✍ವೆಂಕಟೇಶ ಚಾಗಿ
ಲಿಂಗಸುಗೂರ
Venkatesh.chagi1@gmail.com
(ಕವನ)
ಕಟ್ಟಲಾಗಿದೆ ಮನೆಯ
ಮನೆ ಮನೆಗಳ ಮೇಲೆ
ಬೀಸುವ ಗಾಳಿಯ
ತಡೆದು
ಆಗಸ ಮುಟ್ಟುವ ತನಕ
ಮೋಡಗಳು ದಿಕ್ಕೆಡುವ ಹಾಗೆ
ಕಟ್ಟಲಾಗಿದೆ ಮನೆಯ..||
ಕಟ್ಟಲಾಗಿದೆ ಮನೆಯ
ಫಲವತ್ತಾದ ಭೂಮಿಯ ಮೇಲೆ
ಚಿಗುರೊಡೆಯುವ ಬೀಜಗಳ
ಮಣ್ಣು ಮಾಡಿ,
ನೆಲದ ಮೇಲೆಲ್ಲ ಕಾಂಕ್ರೀಟ್
ಹಾಸಿಗೆಯ ಹಾಸಿ
ಕಟ್ಟಲಾಗಿದೆ ಮನೆಯ..||
ಕಟ್ಟಲಾಗಿದೆ ಮನೆಯ
ತಂಪು ನೆರಳನು ಬಿಸಿ ಮಾಡಿ
ಗಿಡಮರಗಳ ಮಾರಣ ಹೋಮ
ಮಾಡಿ,
ಕೆರೆ ನದಿಗಳ ಹೊತ್ತಿ ಉರಿಸಿ
ಕಟ್ಟಲಾಗಿದೆ ಮನೆಯ..||
ಕಟ್ಟಲಾಗಿದೆ ಮನೆಯ
ನಿರ್ಮಲ ಸಾಗರದ ಮೇಲೆ
ಜಲಚರಗಳ ಜಗವ
ಮುಚ್ಚಿ,
ಬೆಟ್ಟಗುಡ್ಡಗಳ ಸಮಗೊಳಿಸಿ
ಹೆಸರೇ ಇಲ್ಲದಂತೆ ಮಾಡಿ
ಕಟ್ಟಲಾಗಿದೆ ಮನೆಯ..||
ಕಟ್ಟಲಾಗಿದೆ ಮನೆಯ
ಕಾನನದ ಮೃತ ದೇಹದ ಮೇಲೆ
ರವಿಯ ಬೆಂಕಿ ಉಂಡೆಗಳ
ನೆಲದ ಮೇಲೆ ಚೆಲ್ಲಿ,
ಹುಲಿ ಸಿಂಹ ಕರಡಿಗಳ ಓಡಿಸಿ
ಮಾನವೀಯತೆಯ ಮರೆತು
ಕಟ್ಟಲಾಗಿದೆ ಮನೆಯ..||
✍ವೆಂಕಟೇಶ ಚಾಗಿ
ಲಿಂಗಸುಗೂರ
Venkatesh.chagi1@gmail.com
Comments
Post a Comment
Comments here