Monday, 12 March 2018

ಹನಿಗವಿತೆಗಳು 5

**ವ್ಹಿಸಿ ಹನಿಗವಿತೆಗಳು**

೧)

'ರೇನ್ ರೇನ್
ಗೋ ಅವೇ' ಎಂದು
ಮಕ್ಕಳೇಕೆ
ಹಾಡಿದರೋ..;
ರೇನ್ ಕಾಣದೇ
ಮಕ್ಕಳು,
ಬಿಸಿಲಲ್ಲಿ
ಆಡುತಿಹರು..|

೨)

ಬಿತ್ತಿ ಬೆಳೆಯುವ ಭೂಮಿ
ಈಗೆಲ್ಲಾ
ಬರೀ ಸೈಟು ಸೈಟು..;
ಅದಕ್ಕೆ ಏನೋ,
ತುತ್ತು ಅನ್ನಕೂ
ಇಲ್ಲಿ
ಆಕಾಶದೆತ್ತರದ
ರೇಟು ರೇಟು..||

೩)

ಮೋಡಗಳಿಗೂ
ಗಿಡಗಳಿಗೂ
ಅದೇನು ನಂಟು.?
ಗಿಡಗಳ ಕಾಣದೇ
ಓಡುತಿವೆ ಮೋಡಗಳು
ಹುಡುಕುತ್ತಾ
ಹುಡುಕುತ್ತಾ
ಗಿಡಮರಗಳ ಟೆಂಟು..||

✍ ವೆಂಕಟೇಶ ಚಾಗಿ
ಲಿಂಗಸುಗೂರ

No comments:

Post a Comment

Comments here