#ಪುಟ್ಕತೆ
ಅದೊಂದು ಅಪರೂಪದ ಪಾರ್ಟಿ. ಆ ನಗರದ ಪ್ರಮುಖ ಕಂಪನಿಯ ಸುಂದರವಾದ ಪಾರ್ಟಿ. ಎಲ್ಲರೂ ಶ್ರೀಮಂತರೇ . ಎಲ್ಲರೂ ತಮ್ಮ ತಮ್ಮ ವ್ಯವಹಾರದಲ್ಲೇ ಮಗ್ನರಾಗಿದ್ದರು. ಪರಿಚಿತರಾದರೂ ಅಪರಿಚಿತರಂತೆ . ಕಿವಿಯಲ್ಲಿ ವಿದೇಶಿ ಹಾಡುಗಳ ಗುಂಗುನ.
ಅಷ್ಟರಲ್ಲಿ ಬಂದ ಒಬ್ಬ ಯುವಕ ತನ್ನ ಹಾಡುಗಳಿಂದ ಎಲ್ಲರನ್ನೂ ರಂಜಿಸತೊಡಗಿದ. ಎಲ್ಲರೂ ಅವನ ಕಲೆಗೆ ತಲೆಬಾಗಿದರು. ಕೆಲವರಂತು ಅವನ ಮೇಲೆ ಹಣದ ಸುರಿಮಳೆಯನ್ನೆ ಸುರಿಸಿದರು. ಎಲ್ಲರೂ ಹೊಗಳಿದ್ದೆ ಹೊಗಳಿದ್ದು. ಕೆಲವರಿಗಂತು ಅವರ ಜೀವನದಲ್ಲಿ ಅದೊಂದು ಮರೆಯದ ಸಮಯವಾಯಿತು.
ಎಲ್ಲರಿಗೂ ಅಪರಿಚಿತನಾಗಿದ್ದ ಆ ಯುವಕ ಪರಿಚಿತನಾದ. ಆ ಕಂಪನಿಯ ಬಾಸ್ ತುಂಬಾ ಸಂತೋಷದಿಂದ ಉಡುಗೊರೆಯನ್ನು ನೀಡಿ ಯಾರಪ್ಪ ನೀನು ಎಂದು ಕೇಳಿದ.ಆಗ ಆ ಯುವಕ 'ಸಾರ್, ನಾನು ನಿಮ್ಮ ಕಂಪನಿಯ ಜವಾನ ಎಂದ".
**ಕಲೆಗಿದೆ ಬೆಲೆ **
✍ ವೆಂಕಟೇಶ ಚಾಗಿ
ಲಿಂಗಸುಗೂರ

No comments:
Post a Comment
Comments here