Sunday, 18 March 2018

ಮತ್ತೆ ಬಂದಿದೆ ಯುಗಾದಿ

*ಯುಗಾದಿಯ ಶುಭಾಶಯಗಳು*

**ಮತ್ತೆ ಬಂದಿದೆ ಯುಗಾದಿ**

ಮತ್ತೆ ಬಂದಿದೆ ಯುಗಾದಿ
ಹರುಷ ತಂದಿದೆ ನಮಗಾಗಿ
ಚಿಗುರು ತುಂಬಿ ಚೆಲುವ ಚೆಲ್ಲಿ
ಹೊಸ ಸಂಭ್ರಮ ತಂದಿದೆ..||

ರೆಂಬೆ ಕೊಂಬೆ ಚಿಗುರು ಚಿಮ್ಮಿ
ಹಕ್ಕಿ ದ್ವನಿಗೆ ಸ್ವರವು ತುಂಬಿ
ಯುಗದ ಆದಿ ಬಂದಿದೆ
ಯುಗಾದಿ ಮರಳಿ ಬಂದಿದೆ..||

ಬೇವು ಬೆಲ್ಲ ಜೊತೆಗೆ ಸೇರಿ
ಸುಖ ದುಃಖಕೆ ನಾಂದಿ ಹಾಡಿ
ನವ ಜೀವನದ ಸೆಲೆಯ ತಂದು
ಯುಗಾದಿ ಮರಳಿ ಬಂದಿದೆ..||

ಹೃದಯಗಳನು ಬೆಸೆಯುತಿದೆ
ಬಯಕೆಗಳನು ಮೂಡಿಸಿದೆ
ಹೊಸ ಬದುಕಿಗೆ ಉಸಿರು ತುಂಬಿ
ಯುಗಾದಿ ಮರಳಿ ಬಂದಿದೆ..||

ಮೇಘಗಳಲಿ ಮಿಂಚಿದೆ
ಧರೆಯು ಹನಿಗೆ ನನೆದಿದೆ
ಮಣ್ಣಿನಲ್ಲಿ ಜೀವ ಬಿತ್ತಿ
ಯುಗಾದಿ ಮರಳಿ ಬಂದಿದೆ..||

- ✍ ವೆಂಕಟೇಶ ಚಾಗಿ
ಲಿಂಗಸುಗೂರ
Vcsahitya.blogspot.in

No comments:

Post a Comment

Comments here