Monday, 19 March 2018

ಪುಟ್ಕತೆ - ಕಸ

#ಪುಟ್ಕತೆ

ಕಸ
 
ಅದೊಂದು ಜನನಿಬಿಡ ಪ್ರದೇಶ. ಯಾರಿಗೂ ಸ್ವಲ್ಪ ನಿಲ್ಲುವಷ್ಟು ತಾಳ್ಮೆ ಇರಲಿಲ್ಲ.ಎಲ್ಲೆಂದರಲ್ಲಿ ಬಿದ್ದ ರಾಶಿ ಕಸ . ಅದನ್ನೇ ತುಳಿದು ಓಡಾಡುತ್ತಿರುವ ಜನ. ಕಸದ ರಾಶಿಯಲ್ಲೇ ತುತ್ತು ಕೂಳು ಹುಡುಕುತ್ತಿರುವ ಹಂದಿಗಳು ನಾಯಿಗಳು. ಅದರಲ್ಲೆ ಹರಿದು ಹಾಕಿದ ಹಾಳೆಗಳು.
 ದಾರಿಯಲ್ಲಿ ಹೋಗುತ್ತಿದ್ದ ಒಬ್ಬ ನಿರುದ್ಯೋಗಿ ಯುವಕನಿಗೆ ಕಸದ ರಾಶಿಯಲ್ಲಿದ್ದ ಹಾಳೆಗಳು ಕೈ ಬೀಸಿ ಕರೆದಂತಾಯಿತು. ಕೈಗೆ ಸಿಕ್ಕಿದ ಹಾಳೆಯನ್ನು ಓದತೊಡಗಿದ. ಎರಡು ಮೂರು ಹಾಳೆಗಳನ್ನು ಓದಿದೊಡನೇ ಕಸದಲ್ಲಿ ಬಿದ್ದ ಎಲ್ಲ ಹಾಳೆಗಳನ್ನು ಸಂಗ್ರಹಿಸಿದ. ಅಲ್ಲೇ ಇದ್ದ ಬೀಡಾ ಅಂಗಡಿಯವನು ಇವನನ್ನು ಬೈದು, ಅದಾವುದೋ ಬಿದ್ದು ಹೋಗಿದ್ದ ಮನೆಯ ಹಳೇ ಕಾಲದ ಹಾಳೆಗಳನ್ನ ಆರಿಸದಂತೆ ಹಾಗೂ ಅದರಿಂದ ಏನೂ ಉಪಯೋಗ ಇಲ್ಲವೆಂದರೂ ಆ ಯುವಕ ಒಂದು ಚೂರು ಹಾಳೆ ಬಿಡದೆ ತನ್ನ ಮನೆಗೆ ತೆಗೆದುಕೊಂಡು ಹೋದ. ಅಲ್ಲಿ ಇಲ್ಲಿ ಸಾಲ ಮಾಡಿ ಎಲ್ಲಾ ಹಾಳೆಗಳಲ್ಲಿದ್ದ ಸಾಹಿತ್ಯವನ್ನು ಅನಾಮಿಕನ ಹೆಸರಲ್ಲಿ ಪುಸ್ತಕ ಪ್ರಕಟಿಸಿದ. ಅದರಲ್ಲಿದ್ದ ಅದ್ಬುತ ಸಾಹಿತ್ಯ ಸಾಕಷ್ಟು ಜನರನ್ನು ಸೆಳೆದಿತ್ತು. ಹಲವಾರು ಮರುಮುದ್ರಣ ಕಂಡ ಆ ಪುಸ್ತಕದಿಂದಾಗಿ ನಿರುದ್ಯೋಗಿ
ಯುವಕ ಶ್ರೀಮಂತ ವ್ಯಕ್ತಿಯಾದ. ಕಸವಾಗಿದ್ದ ಹಾಳೆಗಳು ನಿರುದ್ಯೋಗಿ ಯುವಕನ ನಾಳೆಗಳನ್ನು ಬದಲಾಯಿಸಿದ್ದವು.

✍ವೆಂಕಟೇಶ ಚಾಗಿ
ಲಿಂಗಸುಗೂರ

No comments:

Post a Comment

Comments here