*ನಾಳೆಯೆಂಬುದು*
ನಾಳೆಯೆಂಬುದು ಒಂದು
ಖಂಡಿತ ಬರವುದು ಎಂದು
ಕೊರಗದಿರು ಓ ಮನವೇ
ಕಳೆದು ಸಮಯವಿಂದು |
ನಾಳೆ ಏನಾಗುವುದೋ
ಎಲ್ಲ ಮುಗಿದೊಗುವುದೋ
ಮತ್ತೆ ಮತ್ತೆ ಅನ್ನದಿರು
ಕಳೆದು ಸಮಯವಿಂದು |
ನಾಳೆಯ ಸುಖ ದುಃಖಗಳ
ನಾಳೆಯ ಬಯಕೆಗಳ
ಲೆಕ್ಕಿಸಿ ಗತಿಗೆಡದಿರು
ಕಳೆದು ಸಮಯವಿಂದು |
ನಾಳೆ ನೀ ನಗಬಹುದು
ಅಳುವೂ ಜೊತೆಗಿರಬಹುದು
ಇಂದು ಕೊಲ್ಲುವುದೇಕೆ
ಕಳೆದು ಸಮಯವಿಂದು.|
ಇಂದು ಬಂದಿದೆ ನಿನಗೆ
ಬಂದುದೆಲ್ಲವೂ ನಿನಗೆ
ಇಂದು ನೀ ಮಗುವಾಗು
ಕಳೆದು ಸಮಯವಿಂದು ..||
-ವೆಂಕಟೇಶ ಚಾಗಿ
ಲಿಂಗಸುಗೂರ
ನಾಳೆಯೆಂಬುದು ಒಂದು
ಖಂಡಿತ ಬರವುದು ಎಂದು
ಕೊರಗದಿರು ಓ ಮನವೇ
ಕಳೆದು ಸಮಯವಿಂದು |
ನಾಳೆ ಏನಾಗುವುದೋ
ಎಲ್ಲ ಮುಗಿದೊಗುವುದೋ
ಮತ್ತೆ ಮತ್ತೆ ಅನ್ನದಿರು
ಕಳೆದು ಸಮಯವಿಂದು |
ನಾಳೆಯ ಸುಖ ದುಃಖಗಳ
ನಾಳೆಯ ಬಯಕೆಗಳ
ಲೆಕ್ಕಿಸಿ ಗತಿಗೆಡದಿರು
ಕಳೆದು ಸಮಯವಿಂದು |
ನಾಳೆ ನೀ ನಗಬಹುದು
ಅಳುವೂ ಜೊತೆಗಿರಬಹುದು
ಇಂದು ಕೊಲ್ಲುವುದೇಕೆ
ಕಳೆದು ಸಮಯವಿಂದು.|
ಇಂದು ಬಂದಿದೆ ನಿನಗೆ
ಬಂದುದೆಲ್ಲವೂ ನಿನಗೆ
ಇಂದು ನೀ ಮಗುವಾಗು
ಕಳೆದು ಸಮಯವಿಂದು ..||
-ವೆಂಕಟೇಶ ಚಾಗಿ
ಲಿಂಗಸುಗೂರ
No comments:
Post a Comment
Comments here