**ನಾ ಬೆಳೆಯಲಾರೆ**
ನಾ ಬೆಳೆಯಲಾರೆ
ಆ ರವಿಯ ಬೆಳಕು ಮೂಡಿ
ಕತ್ತಲು ಸರಿದು
ಚೇತನವು ಎಲ್ಲ ಎಲೆಗಳಲಿ
ತುಂಬುವ ತನಕ..
ಹಸಿರು ಮೂಡುವ ತನಕ..||
ನಾ ಬೆಳೆಯಲಾರೆ
ಕಲುಷಿತ ನೀರಿಂದ
ವಿಷ ಹೊರ ಹೋಗುವ ತನಕ
ಆಗಸವು ಸುರಿದ
ಶುದ್ದ ನೀರಲಿ ಮೈದೊಳೆದು
ಮನಸಾರೆ ಕುಡಿಯುವ ತನಕ
ದಾಹ ನೀಗುವ ತನಕ...||
ನಾ ಬೆಳೆಯಲಾರೆ
ಬರಡು ಭೂಮಿಯಲಿ
ಸಾರ ಸತ್ವ ತುಂಬುವ ತನಕ..
ನಿಜ ಖನಿಜಗಳ, ಜೀವ ಕಸದ
ರಸಾಯನ ಕಲಸುವ ತನಕ
ಹಸಿವು ನೀಗುವ ತನಕ...||
ನಾ ಬೆಳೆಯಲಾರೆ
ಮೈಮೇಲೆ ಬಿದ್ದ ಬಣ್ಣ
ಮಾಸುವ ತನಕ..
ಸುತ್ತ ಹರಡಿರುವ ಮುಳ್ಳುಗಳ
ದೂರ ದೂಡುವ ತನಕ
ಮನದ ಅಷ್ಠಗಳ ಅಳಿಸುವ ತನಕ..||
✍ ವೆಂಕಟೇಶ ಚಾಗಿ
ಲಿಂಗಸುಗೂರ
ನಾ ಬೆಳೆಯಲಾರೆ
ಆ ರವಿಯ ಬೆಳಕು ಮೂಡಿ
ಕತ್ತಲು ಸರಿದು
ಚೇತನವು ಎಲ್ಲ ಎಲೆಗಳಲಿ
ತುಂಬುವ ತನಕ..
ಹಸಿರು ಮೂಡುವ ತನಕ..||
ನಾ ಬೆಳೆಯಲಾರೆ
ಕಲುಷಿತ ನೀರಿಂದ
ವಿಷ ಹೊರ ಹೋಗುವ ತನಕ
ಆಗಸವು ಸುರಿದ
ಶುದ್ದ ನೀರಲಿ ಮೈದೊಳೆದು
ಮನಸಾರೆ ಕುಡಿಯುವ ತನಕ
ದಾಹ ನೀಗುವ ತನಕ...||
ನಾ ಬೆಳೆಯಲಾರೆ
ಬರಡು ಭೂಮಿಯಲಿ
ಸಾರ ಸತ್ವ ತುಂಬುವ ತನಕ..
ನಿಜ ಖನಿಜಗಳ, ಜೀವ ಕಸದ
ರಸಾಯನ ಕಲಸುವ ತನಕ
ಹಸಿವು ನೀಗುವ ತನಕ...||
ನಾ ಬೆಳೆಯಲಾರೆ
ಮೈಮೇಲೆ ಬಿದ್ದ ಬಣ್ಣ
ಮಾಸುವ ತನಕ..
ಸುತ್ತ ಹರಡಿರುವ ಮುಳ್ಳುಗಳ
ದೂರ ದೂಡುವ ತನಕ
ಮನದ ಅಷ್ಠಗಳ ಅಳಿಸುವ ತನಕ..||
✍ ವೆಂಕಟೇಶ ಚಾಗಿ
ಲಿಂಗಸುಗೂರ
No comments:
Post a Comment
Comments here