ಹತ್ತು ಹೈಕುಗಳು

**ಹತ್ತು ಹೈಕುಗಳು**

೧)
'ಗಲ್ಲಾ'ಪೆಟ್ಟಿಗೆ
ತುಂಬಿದಷ್ಟು
ಬರಿದಾಗುತೈತಿ..!!

೨) ಬಾರಕೋಡ್ ಯುಗದಲ್ಲಿ
ಬಾರಕೋಲ್ ಮರೆಯಾಗೈತಿ..!!

೩)
ಹಣಿಮ್ಯಾಲ ಕುಂಕುಮ
ಹಚ್ಚಿಲ್ಲ ; ಅಂಟೈತಿ..!!

೪)
ನಾವು ನೀವು ಬೆವುರೊದು
ಮುಖ್ಯ ಅಲ್ಲ ;
ಮೋಡ ಬೆವರಬೇಕಾಗೈತಿ..!!

೫)

ಬ್ಯಾಸಗಿ ದಿವಸದಾಗ
ನಾ ಬರೆದ ಅಕ್ಷರಾನು
ಬೆವರ್ಯಾವ..!!

೬)
ಒಳ್ಳಿ ನೋಡಿದ ಮಳ್ಳಿ ;
ಅವಳ ;
ಮನಸ ಕದ್ದ ಕಳ್ಳಿ..!!

೭)

ಗುಡ್ಯಾಗಿನ ದೇವರಿಗೂ
ಬೇಕಾಗೈತಿ ಎಸಿ..!!

೮)

ಓದಿರೋರು ಗೋಡೆಮ್ಯಾಲಿನ
ಬರಹ , ಬರೀ ಓದಿದ್ರು ಅಷ್ಟೇ..!!

೯)
ನೀರಾಗಷ್ಟ ಸುಳಿ ಇಲ್ಲ
ಜೀವನದಾಗೂ ಅವ.!!

೧೦)
ಮಹಾತ್ಮರೆಲ್ಲಾ ಹೇಳೊದೆಲ್ಲಾ
ಹೇಳ್ಯಾರ..;
ನಾವ್ ಮಾಡೋದು ಬಾಕಿ ಐತಿ..!!


✍ ವೆಂಕಟೇಶ ಚಾಗಿ
For more visit
Vcsahitya.blogspot.in

Comments