*ಬಿಡುಗಡೆ*
ಸುತ್ತ ಮುತ್ತಲೂ
ಕಿಕ್ಕಿರಿದ ಜನರ ಜಂಗುಳಿ
ಎಲ್ಲರಲೂ ಮೌನ..
ಮೌನದೊಳಗೂ
ಆಗಾಗ ಬರುವ
ಪಿಸುಮಾತುಗಳು,
ಮರೆಯಲ್ಲಿ ಮತ್ತಷ್ಟು
ಪ್ರಶ್ನೆಗಳು ;
ಅಯ್ಯೋ ಪಾಪ
ಮತ್ತೆರಡು ಕಣ್ಣಿಂದ ಹನಿ.
ಪಕ್ಕದ ಬೀದಿಯಲೋ
ಹಬ್ಬದ ಹೋಳಿ,
ಆದರಿಲ್ಲಿ ಮೌನ..|
ಅತ್ತವರ ಹರಟೆ
ಕರುಳ ಬಳ್ಳಿಗಳಿಗೆ
ಬೇಗ ಮುಗಿಸುವ ಭರಾಟೆ.
ಮುಡಿಗಿಷ್ಟು
ಹೂವ ಕೊಡದವರು
ಈಗ
ಮೈ ತುಂಬ ಮಾಲೆಗಳ ಭಾರ..
ಕಣ್ಣುಗಳು ಕಾಣಿಸವು
ಕಿವಿಗಳು ಕೇಳುತ್ತಿಲ್ಲ
ಮಾತುಗಳು ಮರೆಯಾಗಿ
ಎಲ್ಲ ಮೌನ ಮೌನ..
ಚಿರಮೌನದ ಹೊದಿಕೆಯೊಳಗೆ
ಬಂದಿ ,
ಆದರೂ ಬಿಡುಗಡೆ
ಭವಬಂಧನಗಳಿಂದ
ಅಜ್ಜಿ ಮೀನಮ್ಮಳಿಗೆ..||
- ವ್ಹಿಸಿ
ಸುತ್ತ ಮುತ್ತಲೂ
ಕಿಕ್ಕಿರಿದ ಜನರ ಜಂಗುಳಿ
ಎಲ್ಲರಲೂ ಮೌನ..
ಮೌನದೊಳಗೂ
ಆಗಾಗ ಬರುವ
ಪಿಸುಮಾತುಗಳು,
ಮರೆಯಲ್ಲಿ ಮತ್ತಷ್ಟು
ಪ್ರಶ್ನೆಗಳು ;
ಅಯ್ಯೋ ಪಾಪ
ಮತ್ತೆರಡು ಕಣ್ಣಿಂದ ಹನಿ.
ಪಕ್ಕದ ಬೀದಿಯಲೋ
ಹಬ್ಬದ ಹೋಳಿ,
ಆದರಿಲ್ಲಿ ಮೌನ..|
ಅತ್ತವರ ಹರಟೆ
ಕರುಳ ಬಳ್ಳಿಗಳಿಗೆ
ಬೇಗ ಮುಗಿಸುವ ಭರಾಟೆ.
ಮುಡಿಗಿಷ್ಟು
ಹೂವ ಕೊಡದವರು
ಈಗ
ಮೈ ತುಂಬ ಮಾಲೆಗಳ ಭಾರ..
ಕಣ್ಣುಗಳು ಕಾಣಿಸವು
ಕಿವಿಗಳು ಕೇಳುತ್ತಿಲ್ಲ
ಮಾತುಗಳು ಮರೆಯಾಗಿ
ಎಲ್ಲ ಮೌನ ಮೌನ..
ಚಿರಮೌನದ ಹೊದಿಕೆಯೊಳಗೆ
ಬಂದಿ ,
ಆದರೂ ಬಿಡುಗಡೆ
ಭವಬಂಧನಗಳಿಂದ
ಅಜ್ಜಿ ಮೀನಮ್ಮಳಿಗೆ..||
- ವ್ಹಿಸಿ
No comments:
Post a Comment
Comments here