Skip to main content

Posts

Showing posts from December, 2017

ಅನಿರೀಕ್ಷಿತ (ಕಥೆ)

* *ಅನಿರೀಕ್ಷಿತ* * ಅದೇ ತಾನೇ ಕವಿಗೋಷ್ಠಿಯನ್ನು ಮನೆಗೆ ಮರಳುತ್ತಿದ್ದೆ ಅಷ್ಟರಲ್ಲಿ ಜಂಗಮವಾಣಿಯ ರಿಂಗಣವಾಯಿತು.ಕಾವ್ಯ ತಾನು ಊರಿಗೆ ಹೋಗುತ್ತಿರುವುದಾಗಿ ಜೊತೆಗೆ ನನ್ನನ್ನು ಬರಲು ಕೇಳಿಕೊಂಡಳು.ಸರಿಯಾಗಿ ಮೂರು ಗಂಟೆಗೆ ಹೊರಡುವ ಬಸ್ ಗೆ ಬರಲು ಹೇಳಿದಳು. ತುಂಬಾ ದಿನಗಳ ನಂತರ ಭೇಟಿಯಾಗುತ್ತಿರುವುದರಿಂದ ಮಾತುಗಳು ಸಾಕಷ್ಟು ಉಳಿದಿದ್ದವು.ಮೊಬೈಲ್ ನಲ್ಲಿ ಅಷ್ಟು ಮಾತಾಡಿದ್ದರೂ ನೇರವಾಗಿ ಮಾತನಾಡಿದ್ದು ಬಹಳ ಕಡಿಮೆ.ಬಡತನದಿಂದ ಬಂದ ಕಾವ್ಯ ತನ್ನ ಮನೆಯ ಜವಾಬ್ದಾರಿ ಹೊತ್ತಿದ್ದಳು.ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೆವು.ನೋಡುವವರ ಕಣ್ಣಿಗೆ ನಾವು ಪ್ರೇಮಿಗಳಾಗಿದ್ದೆವು.ಅದಕ್ಕಾಗಿ ನೇರ ಭೇಟಿ ತುಂಬಾ ಕಡಿಮೆಯಾಗಿತ್ತು ಆದರೆ ಮೊಬೈಲ್ ನಲ್ಲಿ ತುಂಬಾ ಹತ್ತಿರವಾಗಿದ್ದೆವು. ಕವಿಗೋಷ್ಠಿಯಿಂದ ಮನೆಗೆ ಬರುತ್ತದ್ದಂತೆ ಸಮಯವಾಗೇಬಿಟ್ಟಿತು.ಕೈಗೆ ಸಿಕ್ಕ 2-3 ಬಟ್ಟೆಗಳನ್ನು ಬ್ಯಾಗ್ ನಲ್ಲಿ ತುರಿಕಿಕೊಂಡು ಬೈಕ್ ಏರಿದ್ದೆ.ಆಗಾಗ ಟ್ರಾಪಿಕ್ ನಲ್ಲಿ ಸಿಲುಕಿದರೂ ಅವಕಾಶ ಸಿಕ್ಕಲ್ಲಿ ತೂರಿ ಮುಂದೆ ಹೊರಟೆ.ಅಷ್ಟರಲ್ಲಿ ಕಾವ್ಯ ಕರೆ ಮಾಡಿ ಬಸ್ಸು ನನ್ನ ಹಿಂದೆಯೇ ಬರುತ್ತಿರುವುದಾಗಿ ಹೇಳಿದಳು. ಸರ್ಕಲ್ ನಲ್ಲಿ ಸಿಗ್ನಲ್ ಕಂಡು ಬೈಕ್ ಅಲ್ಲೇ ಬಿಟ್ಟು ಬಸ್ ಏರಿದೆ.ಅವಳ ಪಕ್ಕದಲ್ಲಿ ಖಾಲಿ ಇದ್ದ ಸೀಟಿನಲ್ಲಿ ಕುಳಿತೆ. ತಡವಾಗಿದ್ದಕ್ಕೆ ಸಾರಿ ಎಂದೆ ಆದರೆ ಹುಸಿಮುನಿಸಿನಿಂದ ಮುಖವನ್ನು ಕಿಡಕಿಯತ್ತ ತಿರುಗಿಸಿದ್ದಳು.ಆದರೂ ನಾನೇ ಮಾತು ಪ್ರಾರಂಬಿಸಿದೆ.ಕ...

ಬೆಸುಗೆ (ಕಥೆ)

*ಬೆಸುಗೆ* ಕಥೆ ರಾಜೇಶ್ ಏಕಾಂಗಿ ಯಾಗಿ ಪಾರ್ಕ್ ನ ಬೆಂಚ್ ಒಂದರ ಮೇಲೆ ಕುಳಿತಿದ್ದ. ಮನಸ್ಸು ತುಂಬಾ ಭಾರವಾಗಿತ್ತು. ಆಗಲೇ ಸಂಜೆಯಾಗುತ್ತಾ ಬಂದಿತ್ತು. ಉದ್ಯಾನವನದ ತಂಗಾಳಿ,ಹೂಗಳು, ಗಿಡಮರಗಳು, ಹಸಿರು ಹುಲ್ಲಿನ ಮೇಲೆ ಆಟವಾಡುತ್ತಿದ್ದ ಮಕ್ಕಳ ವಿನೋದ ಎಲ್ಲವೂ  ಬಾಹ್ಯವಾಗಿ ಮನಸ್ಸನ್ನು ಖುಷಿಪಡಿಸಲು ಯತ್ನಿಸುತ್ತಿದ್ದರೂ ರಾಜೇಶನ ಮನಸ್ಸಿನ ಆಂತರಿಕ ತುಮುಲಗಳು ಇದಕ್ಕೆಲ್ಲ ಪ್ರತಿರೋಧವನ್ನು ಒಡ್ಡುತ್ತಿದ್ದವು. ಕೆಲವು ಗಂಟೆಗಳ ಹಿಂದೆ ನಡೆದ ಮನೆಯಲ್ಲಿನ ಘಟನೆಗಳು ಮನಸ್ಸನ್ನು ಘಾಸಿಗೊಳಿಸಿದ್ದವು.ತನ್ನ ಹೆಂಡತಿ ಸುಮಾಳ ಹಠದಿಂದಾಗಿ   ನಡೆದ ವಾಗ್ವಾದ ರಾಜೇಶ್ ನನ್ನು ಮನೆ ತೊರೆಯುವಂತೆ ಮಾಡಿತ್ತು.ಸುಮಾ & ರಾಜೇಶ್ ಗೆ ಅವರವರ ಮನೆಯವರೆಂದರೆ ಪಂಚಪ್ರಾಣ.ತಮ್ಮ ತಮ್ಮ ಮನೆಯವರಿಂದ ಏನೇ ತಪ್ಪುಗಳು ಅತಾಚುರ್ಯಗಳು ನಡೆದರೂ ಮಾಫಿ ಮಾಡುವಂತ ಮನಸ್ಸು. ಆದರೆ ಸುಮಾಳಿಗೆ ಗಂಡನ ಮನೆಯವರೆಂದರೆ ಅಷ್ಟಕಷ್ಟೇ. ರಾಜೇಶ್ ನಿಗೂ ಹೆಂಡತಿಯ ಮನೆಯವರೆಂದರೆ ಅಷ್ಟಕಷ್ಟೇ. ಸಣ್ಣ ತಪ್ಪುಗಳನ್ನು ದೊಡ್ಡದಾಗಿ ಮಾಡಿ ಮಾಡುವ ವಾಗ್ವಾದ ಮನೆಯಲ್ಲಿ ಸಾಮಾನ್ಯವಾಗಿತ್ತು‌.ಈ ವಿಚಾರವಾಗಿ ನಡೆದ ವಾಗ್ವಾದ ದಲ್ಲಿ ಸುಮಾ ತೊರೆದರೆ, ರಾಜೇಶ್ ನು ಮನೆ ತೊರೆದು ಬಂದು ಪಾರ್ಕ್ ನಲ್ಲಿ ಕುಳಿತಿದ್ದ. ಅಷ್ಟರಲ್ಲಿ ಒಂದು ಚೆಂಡು ರಾಜೇಶ್ ನ ಕಾಲ ಕೆಳಗೆ ಬಂದು ಸೇರಿತ್ತು. ಚೆಂಡನ್ನು ಹಿಡಿಯಲು ಒಂದು ಪುಟ್ಟ ಮಗು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ತನ್...

ಮತ್ತೆ ಮರಳಿತು ( ಭಾವಗೀತೆ )

*ಮತ್ತೆ ಮರಳಿತು*.. (ಕವಿತೆ) ಯಾರ ತಪದ ಫಲವು ದೊರೆಯಿತು ಬಾನು ಧರೆಗಿದೋ ಸಂಭ್ರಮ ಮೆಲ್ಲ ಬೀಸುವ ಗಾಳಿ ತಂದಿತು ಮಧುರ ಮಿಲನದ ಸರಿಗಮ|| ಕಪ್ಪು ಬೆಣ್ಣೆಯ ಕಡಲು ತಂಬಿತು ಮಿಂಚು ಗುಡುಗಿನ ತನನನ ತಂಪು ಗಾಳಿಯು ಧರೆಗೆ ತಾಕಿತು ಪುಳಕಗೊಂಡಿತು ಮೈಮನ|| ಮೊದಲ ಮುತ್ತಿನ ಹನಿಯು ತಾಕಿತು ಧರೆಯ ಒಡಲಲಿ ಕಂಪನ ಹಸಿರ ಸೆರಗಿಗೆ ಉಸಿರು ತಾಕಿತು ನಗುವ ಚಿಮ್ಮಿತು ಹೂಬನ|| ಮೋಡ ಸರಿಯಿತು ಬಿಸಿಲು ಮೂಡಿತು ಹಕ್ಕಿ ಗೂಡಲಿ ಗುಂಗುನ ನೆಲವು ನೆಂದಿತು ಜೀವ ಮೊಳೆಯಿತು ಮತ್ತೆ ಮರಳಿತು ಶುಭದಿನ|| ✍ವೆಂಕಟೇಶ ಚಾಗಿ ಶಿಕ್ಷಕರು ಲಿಂಗಸುಗೂರ

ಭೀಮನ ಆಟ ( ಮಕ್ಕಳ ಕಥಾಕವನ )

*ಭೀಮನ ಆಟ* ಆಟಕೆ ಕರೆದರು ಭೀಮನನ್ನು ನೂರು ಮಂದಿ ಕೌರವರು ಮರಕೋತಿ ಆಟ ಆಡುವ ಎಂದು ಎಲ್ಲರು ನಿರ್ಣಯ ಮಾಡಿದರು ಅವಲಕಿ ಪವಲಕಿ ಹಾಕಿದರು ಕೌರವರೆಲ್ಲರು ಗೆದ್ದರು ಭೀಮನು ಸೋತನು ಆಟದಲಿ ಕೋಲನು ತರಲು ಓಡಿದನು|| ಎಲ್ಲರು ಮರವನು ಏರಿದರು ಭೀಮನ ಛೇಡಿಸಿ ನಕ್ಕರು ಹತ್ತಲು ಆಗದೆ ಮರವನ್ನು ಸಪ್ಪೆಯ ಮೋರೆ ಹಾಕಿದನು || ಯೋಚನೆ ಮಾಡುತ ಭೀಮನು ಅಲುಗಾಡುವ ಎಲೆ ಕಂಡನು ಬೊಡ್ಡೆಯ ಹಿಡಿದನು ಭೀಮನು ಅಲುಗಾಡಿಸಿದನು ಮರವನ್ನು|| ತಪತಪ ಬಿದ್ದರು ಮರದಿಂದ ಭೀಮನ ಕೈಗೆ ಸಿಕ್ಕಿದರು ಗೆದ್ದನು ಭೀಮನು ಆಟದಲಿ ಜೈ ಜೈ ಎಂದರು ಕೌರವರು || ✍ವೆಂಕಟೇಶ ಚಾಗಿ ಲಿಂಗಸುಗೂರ

ಗೆಲುವು ( ಮಕ್ಕಳ ಕಥಾಕವನ )

*ಗೆಲುವು* ಹತ್ತು ಹತ್ತು ಇಪ್ಪತ್ತು ಓಟದ ಆಟವು ನಡೆತಿದ್ದು| ಇಪ್ಪತ್ತು ಹತ್ತು ಮುವತ್ತು ಆಮೆ ಮೊಲಕೆ ಓಟವು ನಡೆದಿತ್ತು ಮುವತ್ತು ಹತ್ತು ನಲವತ್ತು ಮೊಲವು ಓಟದಿ ಮುಂದಿತ್ತು ನಲವತ್ತು ಹತ್ತು ಐವತ್ತು ಆಮೆಯು ಮೆಲ್ಲಗೆ ನಡೆದಿತ್ತು ಐವತ್ತು ಹತ್ತು ಅರವತ್ತು ಮೊಲವು ಮರದಡಿ ಮಲಗಿತ್ತು ಅರವತ್ತು ಹತ್ತು ಎಪ್ಪತ್ತು ಆಮೆಯು ಗುರಿಯನು ಮುಟ್ಟಿತ್ತು ಎಪ್ಪತ್ತು ಹತ್ತು ಎಂಬತ್ತು ಮೊಲಕೆ ಎಚ್ಚರವಾಗಿತ್ತು ಎಂಬತ್ತು ಹತ್ತು ತೊಂಬತ್ತು ಆಮೆಯು ಆಟದಿ ಗೆದ್ದಿತು ತೊಂಬತ್ತು ಹತ್ತು ನೂರು ಈಕಥೆ ನೀತಿಯ ಸಾರು || ✍ವೆಂಕಟೇಶ ಚಾಗಿ ಲಿಂಗಸುಗೂರ

ಬಾಯಾರಿದ ಕಾಗೆ ( ಮಕ್ಕಳ ಕಥಾಕವನ)

*ಬಾಯಾರಿದ ಕಾಗೆ* ಕಾಗೆಯೊಂದು ನೀರ ಅರಸಿ ಅಲೆಯತೊಡಗಿತು ಎಲ್ಲ ಕಡೆಯೂ ನೀರು ಸಿಗದೆ ಬಳಲಿ ನೊಂದಿತು|| ನೀರು ಹುಡುಕುತೊಂದು ಮನೆಯ ಕಡೆಗೆ ಬಂದಿತು ಗಳಿಗೆಯಲ್ಲಿ ನೀರು ಕಂಡು ಖುಷಿಯ ಪಟ್ಟಿತು|| ಅಲ್ಪ ಸ್ವಲ್ಪ ಇದ್ದ ನೀರು ಸಿಗದೇ ಹೋಯಿತು ಕಾಗೆ ಪಟ್ಟ ಶ್ರಮವು ಎಲ್ಲ ವ್ಯರ್ಥವಾಯಿತು|| ಗಡಿಗೆ ಪಕ್ಕದಲ್ಲೇ ಕಲ್ಲ ಗುಂಪು ನೋಡಿತು ಕೊಕ್ಕಿನಿಂದ ಕಲ್ಲು ತಂದು ಗಡಿಗೆ ತುಂಬಿತು|| ನೀರು ಮೇಲೆ ಬರುವುದನ್ನು ಕಾಗೆ ನೋಡಿತು ಮೇಲೆ ಬಂದ ನೀರು ಕುಡಿದು ಹಾರಿ ಹೋಯಿತು|| ಕಷ್ಟ ಪ‍‍ಡದೇ ನಮಗೆ ಎಂದು ಏನೂ ದೊರಕದು ಕಾಗೆ ಕಥೆಯು ಮರೆಯದಂಥ ಪಾಠ ಕಲಿಸಿತು|| ✍ವೆಂಕಟೇಶ ಚಾಗಿ ಲಿಂಗಸುಗೂರ

ಆಶಯ ( ಕವನ)

ಆಶಯ ಈ ದಿನವೆ ಕೊನೆಯಲ್ಲ ದಿನಗಳು ನೂರಿಹವು ಆಸೆಯ ಬಿಡಬೇಡ ಓ ನನ್ನ ಮನವೇ|| ಬದುಕು ಹರಿಯಲು ನೂರು ದಾರಿಗಳು ಬಹಳುಂಟು ಹಸಿರೆಂಬ ಉಸಿರಿರಲಿ ಕೊನೆಯ ಗಳಿಗೆ|| ಸುಖ ದುಃಖ ಸಮವುಂಟು ಈ ಬಾಳ ಬುತ್ತಿಯಲಿ ಬದುಕಿರುವ ತನಕ ನಗುವೊಂದೆ ಚೇತನವು ಬದುಕಲ್ಲಿ|| ಆ ಗೊಡವೆ ಈ ತರವೆ ಅರಿತುಕೋ ಓ ಮನಸೆ ನಿನ್ನಂತೆ ಜಗವಿವುದು ನೀ ನೋಡೊ ನೋಟದಲಿ|| ಸುಳಿಯೊಳಗೆ ಸಿಲುಕದಿರು ಅತಿಯಾಸೆ ನೀರೊಳಗೆ ಬದುಕೆ ಮಸಣವಾದೀತು ಮರೆಯದಿರು ಓ ಮನವೆ || ಕಲ್ಲಿರಲಿ ಮುಳ್ಳಿರಲಿ ಪ್ರತಿಹಾದಿ ಹಿತವಿರಲಿ ಮಾತಲ್ಲಿ ಮುತ್ತಿರಲಿ ಜಗವೇ ಕೈಯೊಳಗೆ || ✍ವೆಂಕಟೇಶ ಚಾಗಿ      ಲಿಂಗಸುಗೂರ

ಮಂಗ & ಮೊಸಳೆ (ಮಕ್ಕಳ ಕಥಾಕವನ)

ಮಂಗ & ಮೊಸಳೆ (ಮಕ್ಕಳ ಕಥಾಕವನ) ಕಾಡಲಿ ಒಂದು ಕೆರೆಯಿತ್ತು ದಂಡೆಯ ಮೇಲೆ ಮರವಿತ್ತು ಮರದಲಿ ಮಂಗ ಕೆರೆಯಲಿ ಮೊಸಳೆ ಇಬ್ಬರ ಗೆಳೆತನ ಚೆನ್ನಾಗಿತ್ತು|| ಮಂಗವು ಮರವನು ಏರಿತ್ತು ತಿಂದಿತು ರುಚಿ ರುಚಿ ಹಣ್ಣನ್ನು ಮೊಸಳೆಗು ಕೊಟ್ಟಿತು ಮೊಸಳೆಯು ತಿಂದಿತು ಹೊಗಳಿತು ಮಂಗನ ಗುಣವನ್ನು|| ಗೆಳೆತನ ಸುಂದರವಾಗಿತ್ತು ದಿನಗಳು ಕಳೆದವು ಸಂತಸದಿ ಮಂಗನ ಚೇಷ್ಟೆ ಮೊಸಳೆಯ ನಿಷ್ಠೆ ಮಾದರಿ ಗೆಳೆತನ ಕಾಡಿನಲಿ|| ಮೊಸಳೆಗು ಇದ್ದಳು ಹೆಂಡತಿಯು ತಿಂದಳು ರುಚಿ ರುಚಿ ಹಣ್ಣನ್ನು ಮಂಗನ ಹೃದಯ ತರುವೆಯಾ ಇನಿಯಾ ಹೆಂಡತಿ ಹಿಡಿದಳು ಹಠವನ್ನು|| ಮೊಸಳೆಯು ಮಂಗನ ಕರೆದಿತ್ತು ಭೋಜನಕೂಟವು ಮನೆಯಲ್ಲಿ ಮೊಸಳೆಯ ಬೆನ್ನನು ಏರಿದ ಮಂಗ ಹೊರಟಿತು ಸವಾರಿ ಖುಷಿಯಲ್ಲಿ|| ಇಬ್ಬರು ಕೆರೆಯ ಮಧ್ಯದಲಿ ಮೊಸಳೆಯು ಹೇಳಿತು ನಿಜವನ್ನು ರುಚಿ ರುಚಿ ಹೃದಯವ ಮರದಲೇ ಬಿಟ್ಟೆ ಹೂಡಿತು ಮಂಗ ಉಪಾಯವನ್ನು|| ಮರಳಿತು ಸವಾರಿ ಹಿಂದಕ್ಕೆ ಹೃದಯವನಿಟ್ಟ ಮರದಕಡೆ ದಂಡೆಯು ಬರಲು ಮಂಗವು ಜಿಗಿದು ಏರಿತು ಮರವನು ಕೊಂಬೆಯ ಕಡೆ|| ಮಂಗವು ಬುದ್ದಿಯ ಹೇಳಿತ್ತು ಮೊಸಳೆಗೆ ತಪ್ಪು ಅರಿವಾಯ್ತು ದುಷ್ಟರ ಗೆಳೆತನ ಕೆಟ್ಟದು ಎಂದು ಮೊಸಳೆಯ ಗೆಳೆತನ ಬಿಟ್ಟಿತ್ತು|| ✍ವೆಂಕಟೇಶ ಚಾಗಿ Ghps Eachanal ಲಿಂಗಸುಗೂರ