**ಹತ್ತು ಹೈಕುಗಳು** ೧) 'ಗಲ್ಲಾ'ಪೆಟ್ಟಿಗೆ ತುಂಬಿದಷ್ಟು ಬರಿದಾಗುತೈತಿ..!! ೨) ಬಾರಕೋಡ್ ಯುಗದಲ್ಲಿ ಬಾರಕೋಲ್ ಮರೆಯಾಗೈತಿ..!! ೩) ಹಣಿಮ್ಯಾಲ ಕುಂಕುಮ ಹಚ್ಚಿಲ್ಲ ; ಅಂಟೈತಿ..!! ೪) ನಾವು ನೀವು ಬೆವುರೊದು ಮುಖ್ಯ ಅಲ್ಲ ; ಮೋಡ ಬೆವರಬೇಕಾಗೈತಿ..!! ೫) ಬ್ಯಾಸಗಿ ದಿವಸದಾಗ ನಾ ಬರೆದ ಅಕ್ಷರಾನು ಬೆವರ್ಯಾವ..!! ೬) ಒಳ್ಳಿ ನೋಡಿದ ಮಳ್ಳಿ ; ಅವಳ ; ಮನಸ ಕದ್ದ ಕಳ್ಳಿ..!! ೭) ಗುಡ್ಯಾಗಿನ ದೇವರಿಗೂ ಬೇಕಾಗೈತಿ ಎಸಿ..!! ೮) ಓದಿರೋರು ಗೋಡೆಮ್ಯಾಲಿನ ಬರಹ , ಬರೀ ಓದಿದ್ರು ಅಷ್ಟೇ..!! ೯) ನೀರಾಗಷ್ಟ ಸುಳಿ ಇಲ್ಲ ಜೀವನದಾಗೂ ಅವ.!! ೧೦) ಮಹಾತ್ಮರೆಲ್ಲಾ ಹೇಳೊದೆಲ್ಲಾ ಹೇಳ್ಯಾರ..; ನಾವ್ ಮಾಡೋದು ಬಾಕಿ ಐತಿ..!! ✍ ವೆಂಕಟೇಶ ಚಾಗಿ For more visit Vcsahitya.blogspot.in